Friday 13 July 2012

ಮಾತೇಕೋ ಬರದಾಗಿವೆ..





ಮಾತೇಕೊ ಬರದಾಗಿವೆ
ಮೌನದಲಿ ಬತ್ತಿಹೋಗಿವೆ
ಮಾಯದ ಪ್ರೀತಿಗೆ ಮರುಳಾಗಿ
ಕಳೆದೋಗಿವೆ…

ಇಂದೆಕೋ ಈ ವೇದನೆ
ಹೊಸ ನೋವ ತಂದಾಗಿದೆ
ಗೆಳತಿ ನೀನಿದಲ್ಲೆ
ಕ್ಷಣ-ಕ್ಷಣವು ಯುಗವಾಗಿವೆ,
ಕಾಲನ ಗಡಿಯಾರದಿ
ಸಮಯವು ನಿಂತ ಹೋಗಿದೆ.

ಹುಟ್ಟಿದ ಆ ಪ್ರೀತಿಯ ತೊಟ್ಟಿಲಲಿ 
ಜೀಕಾಡಿದ ಸಂತಸ,
ಮಾಸದ ಸುಧೆಯಾಗಿ ಹರಿಯುತಿದೆ
ಅನುದಿನದಿ.

ಸಿ.ಎಸ್.ಮಠಪತಿ

Wednesday 11 July 2012

ಕೋರಿಕೆ



ಏನು ಮಾಡಲಿ ಜೀವವೆ ನೀನಿಲ್ಲದ
ಬರಿದಾದ ಮನೆ ಮನದಲಿ
ಕನವರಿಸುತಿಹೆ ಬಯಕೆಗಳು 
ನಿನ ಹೆಸರ ನೆನೆವಿನಲಿ..

ಆದ ಆವಾಂತರವ ಮತ್ತೆ ಮತ್ತೆ ನೆನೆದು
ದೂರಾದರೆ ಮತ್ತೆ ಒಂದಾಗವು ಮನವು
ಹಸಿಯಾದ ನೋವು ಬಲಿತು ಹುಣ್ಣಾಗುವ
ಮೊದಲು ಮನವರಿಕೆ ಮಾಡಿಕೊ
ನಮ್ಮ ಹೃದಯದಾಶೆಯ...

ದಂಡಿಸ ಬೇಡ ಮೃದುಲ ಮನವ
ಅರಳಿಹವು ವಾಂಛೆಗಳು
ಪ್ರೀತಿ ಬಳ್ಳಿಯಲಿ
ಬದುಕು ಕನಸಲಿ ಮಿಂದು,
ಮುರಿದು ಹೋಗಲು ಮನಸು
ಜಗದಿಯಿಲ್ಲ ಮದ್ದು… 

ಯಾರು ಇಲ್ಲ ಯಾರಿಗೆ
ಯಾಂತ್ರಿಕವಾಗಿವೆ ಎಲ್ಲವು
ಅರಿತು ಬೆರೆತು ಚಿಂತಿಸು,
ಬಾ ಹೊರಟು ಸುಮ್ಮನೆ
ನನ್ನ ಮನದ ಮನೆಯಲಿ
ಅರಿತು ಬೆರೆತು ಬಾಳಲು..!!

ಸಿ.ಎಸ್.ಮಠಪತಿ

Saturday 7 July 2012

ನಾ ಕಳೆದು ಹೋದೆ ಅವಳ ನೆನಪಲಿ!!



          ನಾನು ಅವಳಿಗೆ(ಅವಳ ನೆನೆಪಿಗೆ) ವಿದಾಯ ಹೇಳಬೇಕು .ಸುಖಾಸುಮ್ಮನೆ ಅನವಶ್ಯಕವಾಗಿ ಅವಳ ಪಕ್ವ ಸ್ನೇಹದಾಶೆಯ ಬಲೆಗೆ ಬಿದ್ದು ಮೈ ಮನವೆಲ್ಲ ಬರೆ ಹಾಕಿಕೊಂಡೆ,ನೆನೆದರೆ ಮೈಕಂಪನಗೋಳ್ಳುತ್ತದೆ.ಜೀವನ ಹಾಗೆಯಲ್ಲವೆ,ಹಿಡಿಯಷ್ಟು ಏನಾದರು ಕೊಟ್ಟು ನಮ್ಮಿಂದ ಬೆಟ್ಟದಷ್ಟು ಕಸಿದುಕೊಳ್ಳುತ್ತದೆ.ಅದಕ್ಕೆ ಇರಬಹುದು ನಾನು ನನ್ನತನವನ್ನೆಲ್ಲ ಮರೆತು ಅವಳ ಬೊಗಸೆ ಸ್ನೇಹಕ್ಕಾಗಿ ನನ್ನೆದೆಲ್ಲವನ್ನು ಬಲಿಯಾಗಿಕೊಟ್ಟೆ. ಎಲ್ಲವನ್ನು ಧಾರೆಯೆರೆಯುವಾಗಲಾದರು ನನ್ನಿವತ್ತಿನ ದಿನಗಳ ಚಿತ್ರಣ ದುಸ್ವಪ್ನದ ರೂಪದಲ್ಲಾದರು ಬಂದು ನನ್ನನ್ನು ಎಚ್ಚರಿಸಬಾರದಿತ್ತೆ.

        ಮುಳುಗುತ್ತಿರುವ ಸೂರ್ಯನ ಜತೆಗೆ ಕಳೆದುಹೋಗುವ ಬೆಳಕಿಗಾಗಿ ಕೇವಲ ಹನ್ನೆರಡು ಗಂಟೆ ಕಾಯ್ದರೆ ಸಾಕು, ಆದರೆ ಅದೆ, ಕಾಲನ ಚಕ್ರಕೆ ಸಿಕ್ಕು ಅಸುನೀಗಿ ಹೋಗುವ ಸಂಬಂಧಗಳಿಗೆ ಕ್ಷಣ,ಗಂಟೆ,ಕಾಲ,ಯುಗ,ಹೀಗೆ ಕಾಲಪರೀಧಿಯ ಅಂಕೆಯನ್ಹಾಕಬಹುದೆ?ನನ್ನ ಧಮನಿ ಧಮನಿಯಲಿ ನುಸುಳಿ, ನೆಲೆಸಿ, ಘನಬಲವನು ಕೊಟ್ಟು ಉನ್ಮಾದತೆಯಲಿ ತೇಲಿಸಿ ಮರೆಯಾದ ಅಗಣಿತ ಸೌಖ್ಯದ ಆಗರ ನೀನು.ಮತ್ತೆ ಆ ಒಲವ ಮರೆಯಲಿನ ಸ್ನೇಹ ಸಿಂಚನಕ್ಕಾಗಿ ನಿನ್ನ ಶಾಶ್ವತ ಗೈರಿನಲಿ  ನೀ ಬರದ ದಾರಿಯನು ಆಶೆ ತುಂಬಿದ ನಿರೀಕ್ಷೆಯ ಇಣುಕು ನೋಟದಿಂದ ಕಾಯುತ್ತಿರುವ ಹುಂಬ ನಾನು.ಏನು ಮಾಡಲಿ ಅನಿಶ್ಚತತೆಯ  ದಾರಿಯಲಿ  ಜೀವನ ಸಾಗುತ್ತಿದೆ ಒಂದು ಧೀರ್ಘತೆಯ ಶಾಶ್ವತ  ಸಾತ್ವಿಕ  ಬದುಕಿನ ನಿರೀಕ್ಷೆಯಲಿ.

     ನೀನು ಒಂದಿಷ್ಟು ಆಘಾದವಾದ ನಲಿವನು ನೀಡಿ ನನ್ನನು  ನಂತಸದ ಅಲೆಯಲಿ ತೇಲಿಸಿ ಮರೆಯಾಗಿರಬಹುದು, ಆದರೆ ನನ್ನ ಹೃದಯದ ಪ್ರತಿ ಕವಾಟಿನ ಗೋಡೆಗಳ ಮೇಲೆ ಆ ಕ್ಷಣಗಳು ಅಮರ ನೆನಪುಗಳು..!! ಜೀವನದಲ್ಲಿ ನಮ್ಮ ಮುಖದ ಗೆರೆಗಳ ಆಳ ಮತ್ತು ಅಳಲನ್ನು ನಮಗೆ ಅರ್ಥ  ಮಾಡಿಕೊಳ್ಳಲು ಆಗುವದಿಲ್ಲ,ಅಂಥವುದರಲ್ಲಿ ಎಲ್ಲಿಂದಲೋ ದುತ್ತೆಂದು ದೌಡಾಯಿಸಿ ಬಂದು ಎಲ್ಲೆಮೀರಿದ ನಾ ಕಾಣದ, ಯಾರು ನೀಡದೆಯಿದ್ದದ್ದನ್ನಲ್ಲ ಕೊಟ್ಟೆ, ಈಗ ಮತ್ತದೆ ನೀನಿಲ್ಲದ ಬವಣೆಯ ಭಾವತೀರದಲಿ ಏಕಾಂಗಿ ಕ್ಷಣಗಳು,ಮತ್ತೆದೆ ದುಗುಡ-ದುಮ್ಮಾನ, ಕತ್ತಲಿನ ಕುರುಡು ಪ್ರಯಾಣ..!!

   "ನಾವು ಯಾರನ್ನಾದರನ್ನು ನೆನಪಿನಲ್ಲಿಟ್ಟುಕೊಳ್ಳಬೆಕೆಂದರೆ ಅವರನ್ನು ಆದಷ್ಟು ಮರೆಯಲು ಪ್ರಯತ್ನಿಸಬೇಕಂತೆ"ನನ್ನೀ ಅನುಭವದ ವಾಕ್ಯಕೆ ನನ್ನನು ಮಾರಿಕೊಂಡು ಎಷ್ಟೋ ವಸಂತಗಳೇ ಕಳೆದು ಹೋಗಿವೆ. ನೀ ಬಂದೆ ಬಾಳಿಗೆ, ಹೇಳದೆಯೆ-ಕೇಳದೆಯೆ, ನಾ ಕರೆಯದೆ..!! ಇವತ್ತು ಪ್ರತಿ ಕ್ಷಣವು ಸತ್ತು-ಸತ್ತು ಬದುಕುತ್ತಿರುವೆ ನಿನ್ನ ಮರೆಯುವ ಹರಸಾಹಸದಲಿ..!! ನಿನ್ನಲಿ ನನ್ನದೊಂದು ಕೊನೆಯ ಕೋರಿಕೆ,ಆವರೊಪದಲ್ಲಾದರು ಬಂದು ನಿನ್ನೆಲ್ಲ ನೆನಪಿನದಾಳದಿಂದ ಮುಕ್ತನಾಗುವ ಮಾರ್ಗೋಪಾಯವನ್ನು ನನ್ನ ಕರ್ಣಗಳಲಿ ಉಸುರಿ ಹೋಗು..!!ಮತ್ತೆ ನಿನ್ನ ನೆನಪಿನೆಡೆ ನಡೆಯದೆ ಹೊಸ ಬಾಳು ಕಟ್ಟಿ ಕೊಳ್ಳುವೆ...!!!

ಇಂತಿ ನಿನ್ನ 
ನೆನೆವ ಹೃದಯ, ಅನುದಿನ ಅನುಕ್ಷಣ...!!
ಸಿ.ಎಸ್.ಮಠಪತಿ