Monday 28 May 2012

..ಮುದ್ದು ಒಲವೆ..



ಇಲ್ಲಿಯು ಇಲ್ಲ ಅಲ್ಲಿಯು ಇಲ್ಲ 
ಎಲ್ಲಿರುವಾ ನೀ ಮಲ್ಲಿಗೆ ಓ ಮುದ್ದು ಮಲ್ಲಿಗೆ...
ನಿನ್ನ ನೆನಪ ತಕ್ಕಡಿಯಲಿ
ತೂಕಡಿಕೆಯ ಗಾರುಡಿಯಲಿ
ತೇಲಿದೆ,ತೇಲಿ ತೇಲಾಡಿದೆ
ಮರೆತು ಮೈಮನವನು ಮಲ್ಲಿಗೆ ಓ ಮುದ್ದು ಮಲ್ಲಿಗೆ...
ಮಧುರ ಮುಸ್ಸಂಜೆಯಾ
ಹೊಂಬೆಳಕ ಹೊಸತನದಲಿ
ಹೃದಯ ಮುಂಬಾಗಿಲ
ಚಂದಿರನ ಬೆಳದಿಂಗಳಲಿ
ಕಾದಿರುವೆ ನಾ ನಿನ್ನ ಒಲವಿಗೆ
ಮಲ್ಲಿಗೆ ಓ ಮುದ್ದು ಮಲ್ಲಿಗೆ...
ಬೊಗಸೆ ಒಲವ ಕೊಡುವೆಯಾ
ಮೌನ ಮುರಿದು ಬರುವೆಯಾ
ಬರುವುದಾದರೆ ಹೇಳು
ಅಂತಪುರವ ಸ್ವಚ್ಛಗೊಳಿಸಿ
ಗುಡಿಯ ಕಟ್ಟುವೆ, ಸಿಂಗರಿಸಿ ಮನದ ಮಹಲನು
ಇಂಬುಗೊಳಿಸುವೆ
ಒಲವೆ ನಿನ್ನ ಯಾವ ಹಂಗು ಇಲ್ಲದೆ..
ಸಿ.ಎಸ್.ಮಠಪತಿ

..ನನ್ನ ಹಾಡು..



ಮನಸು ಭಾರವಾಗಬೇಕು
ತೆರೆಯಾಗಿ ಬಂದು ದುಃಖವು ಆವರಿಸಿ
ಕತ್ತಿನಲಿ ಬಂಧಿಯಾದ ಭಾರ-ಭಾವನೆ ಶರವೇಗದಿ
ಕಂಬನಿ  ಹರಿಸಿ  ಎದೆಯ ಹಗುರಾಗಿಸಬೇಕು.......

ಅವಳು ಬರಬೇಕು ಸ್ನೇಹಿತೆಯಾಗಿ, ಭೋಧಕಿಯಾಗಿ
ಅವನು ಬರಬೇಕು ಬಾಳ ಬರಹ ಬದುಕು ಉಮೇದುದಾರನಾಗಿ
ಸಾವಿನಂಚಿನಲಿನ ಸಂಬಂಧಗಳ  ಹೃದಯದೂರಿಗೆ ಬಾಳ ಧೀರ್ಘತೆಗೆ..

ಯಾರ ಬದುಕು ಯಾರ ಕೈಲೋ
ಜಗವೇ ಇಲ್ಲ ಇಂದು ಸಂಬಂಧಗಳ ಸರಪಳಿಯಲಿ
ಕೇವಲ ನೀನು ನೀನಾನಗದಿರು ನಾನು ನಾನಾಗದಿರುವೆ
ನಾವು ಒಂದಾಗಿ ನಾವಾಗಿ ಇರುವಾ….
ಯಾಂತ್ರಿಕ  ಬಾಳ ಪಯಣದಲಿ...!!!!


ಸಿ.ಎಸ್.ಮಠಪತಿ

Saturday 19 May 2012

..ಚೆಲುವೆ..



ನಿದ್ದೆಗೋಗುವ ಮುನ್ನ ಕದ್ದು ನೀ ಮನವ
ಕರೆದೋಯ್ಯುವೆ ನೀನೆಲ್ಲಿಗೆ ಸದ್ದಿಲ್ಲದೆ ನನ್ನ....

ನಿದ್ದೆ ಒದ್ದೆಯಾ ಕಣ್ಣಿನಲಿ
ಮೆದು ಮುದ್ದೆಯಾಗಿ ಬಂದು
ಕಣ್ಣ ಕರಟದಲಿ ಕನಸಿನ ಹೂ ಚೆಲ್ಲಿ
ಒದ್ದೆ ಕಣ್ಣಿನ ಕದ ತಟ್ಟಿ ಇಣುಕಿ ನೋಡುವ ಮುನ್ನ
ನೀನೆಲ್ಲಿ ಇರುವೆ ನಾ ಕಾಣೆ ಚೆಲುವೆ.....

ಖಾಲಿ ಕಾಗದ ಹಿಡಿದು ಕವನವ ಬರೆಯುವ ಮುನ್ನ
ಕಲ್ಪನೆಯಾ ಸಾಗರದಿ ಮೆರೆದು
ಮರೆಯಾಗುವ ನೆನಪೆ
ನೀನೆಲ್ಲಿ ಇರುವೆ ನಾ ಕಾಣೆ ಚೆಲುವೆ.....

ಖಾಲಿ ಕೊಡವ  ಹಿಡಿದು ಹಾರೂಕೆರೆಗೆ
ನೀರು ತರಲು ಹೋದೆ
ನೀರ್ತೆಯಮೇಲೆ ಅಲೆಯಾಗಿ ತೇಲಿ
ಖಾಲಿ ಕೊಡವ ಹೊರಿಸಿ ಮರಳಿ ಕಳುಹಿಸಿದ
ಚೆಲುವ..
ನಿನೆಲ್ಲಿ ಇರುವೆ ನಾ ಕಾಣೆ ಚೆಲುವೆ...

ಸಿ.ಎಸ್.ಮಠಪತಿ

ಓ ಶಾಂತಿಯೆ ನೀ ಬಾ..



ಎನ್ನ ಮನದ ಪಾಳುಬಿದ್ದ ಧರಿತ್ರೆಯಲಿ 
ಓಳು ಇಳೆಯನು ಹಸನಾಗಿಸಿ ಹದಗೊಳಿಸಿ
ಡಿಂಭಪಕ್ವ ಬಂಜೆಗಡ್ಡೆಯು 
ಎನ್ನಫಲಿಸಲು ಬರುವನೊಬ್ಬ ವೀರ ಕೋಟಿ-ಕೋಟಿ
ಶೂರರನು ದಾಟಿ,
ಎನ್ನ ಅಪ್ಪಿ ಮುದ್ದಿಸಿ ಉದ್ಭವಿಸಲು ವಂಸವೃಕ್ಷವನು
ಎಂದು ಕಾದು ಫಲಿತು ವಂಸವೃಕ್ಷವಾಗುವಹಾಗೆ,
ಫಲಿಸದೆ ನಿಸರ್ಗದ ಸೆಳವಿಗೆ ಸಿಕ್ಕು ನಿಸ್ಹಾಯಕ ಸಾಗರವಾ ಸೇರುವ ಹಾಗೆ 
ಕಾಯುತಿದೆ ಎನ್ನ ಮನ ಇಂದು ನಿನ್ನ ಬರುವಿಗಾಗಿ...!!!!

ಎನ್ನ ಮನದ ಧೂಳು ತುಂಬಿದಾ ಅಂತಪುರದ ಮುಲೆಯ ಜಾಡುವ ಜಾಡಿಸಿ
ಬೇಕಾಗುವ ಆಟಿಕೆಯಾ ಜೋಡಿಸಿ
ಬಿರು ಬೇಸಿಗೆಯಲಿ ತನ್ನ ಸುಜಲದಿಂದ ಭೂಮಾತೆಯ ದಾಹವ ತಣಿಸಿ
ಮತ್ತೆ ಮುಂಗಾರಿಗೆ ಕಾಯುವ ಬರಿದಾದ ಕೆರೆಯ ಹಾಗೆ
ಕಾಯುತಿದೆ ಎನ್ನ ಮನ ಇಂದು ನಿನ್ನ ಬರುವಿಗಾಗಿ...!!!!

ಎನ್ನ ಮನದ ಗರ್ವ ತುಂಬಿದ ದುರ್ಗಂಧದ ಗೂಡಿನಲಿ
ಎಂದೂ ಒಂದು ಗುರುವಾಕ್ಯ ನುಸುಳಿ
ದೀಪವ ಉರಿಸುತಿದೆ ಬಿರುಗಾಳಿಗೆ ಸಿಕ್ಕ ದೋಣಿಯ ಹಾಗೆ,
ನಾವಿಕನಿಗಾಗಿ ಮತ್ತೆ
ಕಾಯುತಿದೆ ಎನ್ನ ಮನ ಇಂದು ನಿನ್ನ ಬರುವಿಗಾಗಿ...!!!!

ಕೋಟಿ ಶೂರರನು ದಾಟಿ,
ಧೂಳು ತುಂಬಿದಾ ಅಂಧವ ಸೀಳಿ
ಗರ್ವತೆಯ ಮೆಟ್ಟಿ 
ಓ ಶಾಂತಿಯೇ ನೀ ಬಾ ಎಂದೆಂದು 
ಈ ಮನದ ಅಮರತೆಗೆ ಆತ್ಮದೀಪ ಬೆಳಗಲು
ನನ್ನ ಬಾಳ ಸಾರಥಿಯಾಗಿ......

ಚಿನ್ಮಯ್……