Saturday 19 May 2012

ಓ ಶಾಂತಿಯೆ ನೀ ಬಾ..



ಎನ್ನ ಮನದ ಪಾಳುಬಿದ್ದ ಧರಿತ್ರೆಯಲಿ 
ಓಳು ಇಳೆಯನು ಹಸನಾಗಿಸಿ ಹದಗೊಳಿಸಿ
ಡಿಂಭಪಕ್ವ ಬಂಜೆಗಡ್ಡೆಯು 
ಎನ್ನಫಲಿಸಲು ಬರುವನೊಬ್ಬ ವೀರ ಕೋಟಿ-ಕೋಟಿ
ಶೂರರನು ದಾಟಿ,
ಎನ್ನ ಅಪ್ಪಿ ಮುದ್ದಿಸಿ ಉದ್ಭವಿಸಲು ವಂಸವೃಕ್ಷವನು
ಎಂದು ಕಾದು ಫಲಿತು ವಂಸವೃಕ್ಷವಾಗುವಹಾಗೆ,
ಫಲಿಸದೆ ನಿಸರ್ಗದ ಸೆಳವಿಗೆ ಸಿಕ್ಕು ನಿಸ್ಹಾಯಕ ಸಾಗರವಾ ಸೇರುವ ಹಾಗೆ 
ಕಾಯುತಿದೆ ಎನ್ನ ಮನ ಇಂದು ನಿನ್ನ ಬರುವಿಗಾಗಿ...!!!!

ಎನ್ನ ಮನದ ಧೂಳು ತುಂಬಿದಾ ಅಂತಪುರದ ಮುಲೆಯ ಜಾಡುವ ಜಾಡಿಸಿ
ಬೇಕಾಗುವ ಆಟಿಕೆಯಾ ಜೋಡಿಸಿ
ಬಿರು ಬೇಸಿಗೆಯಲಿ ತನ್ನ ಸುಜಲದಿಂದ ಭೂಮಾತೆಯ ದಾಹವ ತಣಿಸಿ
ಮತ್ತೆ ಮುಂಗಾರಿಗೆ ಕಾಯುವ ಬರಿದಾದ ಕೆರೆಯ ಹಾಗೆ
ಕಾಯುತಿದೆ ಎನ್ನ ಮನ ಇಂದು ನಿನ್ನ ಬರುವಿಗಾಗಿ...!!!!

ಎನ್ನ ಮನದ ಗರ್ವ ತುಂಬಿದ ದುರ್ಗಂಧದ ಗೂಡಿನಲಿ
ಎಂದೂ ಒಂದು ಗುರುವಾಕ್ಯ ನುಸುಳಿ
ದೀಪವ ಉರಿಸುತಿದೆ ಬಿರುಗಾಳಿಗೆ ಸಿಕ್ಕ ದೋಣಿಯ ಹಾಗೆ,
ನಾವಿಕನಿಗಾಗಿ ಮತ್ತೆ
ಕಾಯುತಿದೆ ಎನ್ನ ಮನ ಇಂದು ನಿನ್ನ ಬರುವಿಗಾಗಿ...!!!!

ಕೋಟಿ ಶೂರರನು ದಾಟಿ,
ಧೂಳು ತುಂಬಿದಾ ಅಂಧವ ಸೀಳಿ
ಗರ್ವತೆಯ ಮೆಟ್ಟಿ 
ಓ ಶಾಂತಿಯೇ ನೀ ಬಾ ಎಂದೆಂದು 
ಈ ಮನದ ಅಮರತೆಗೆ ಆತ್ಮದೀಪ ಬೆಳಗಲು
ನನ್ನ ಬಾಳ ಸಾರಥಿಯಾಗಿ......

ಚಿನ್ಮಯ್……

No comments:

Post a Comment