Sunday 11 November 2012

ಬಾ ಬೆಳಕೆ....


ಬಾ ದೀಪಾವಳಿ
ನನ್ನೊಲವಿನ ಹೃದಯಗಳಿಗೆ
ಪ್ರಭೆಯ ಸೂಸಿ
ಎತ್ತನದೆತ್ತ ಬಾಳ ಪಥದಿ
ತಮವ ಕಳೆದು ದೀಪ
ಬೆಳಗು ಬಾ....

ಅಡಿಗಡಿಗೆ
ಬಲವ ನೀಡಿ
ಬದುಕು ಪಯಣಕೆ
ಕರವ ಹಿಡಿದು ನಡೆಸಲು
ಜೊತೆಗಾರನಾಗಿ
ಒಡನಾಡಿಯಾಗಿ  ಬಾ…......

ಎಲ್ಲ ಸುಃಖವ ಹೊತ್ತು ತಂದು
ನೆಮ್ಮದಿ ಕ್ಷಣಗಳ ಕೊಡಮಾಡುತ
ಬಿಸಿ ಉಸಿರ ತೊಲಗಿಸಿ
ಶಾಂತಿ-ಸಮೃದ್ಧಿಯ ನೆಲೆಸಲು
ಎಲ್ಲರ ಬಾಳ ತೀರಕೆ
ಚೆಲುವ-ಒಲವಾಗಿ ಬಾ
ನಲಿವಾಗಿ ಬಾ
ಗೆಲುವಾಗಿ ಬಾ
ಜೀವೊಲ್ಲಾಸವಾಗಿ ಬಾ
ಬಿಗುಮಾನವಾಗಿ ಬಾ....
ಎಲ್ಲ ಮನೆಮನಗಳಿಗೆ 
ನಗುವ ಹೊತ್ತು ನೆಗೆನೆಗೆದು ಬಾ…

ಲರಿಗೂ ದೀಪಾವಳಿಯ ಶುಭಾಶಯಗಳೊಂದಿಗೆ...
(
ಸಿ.ಎಸ್.ಮಠಪತಿ)

No comments:

Post a Comment