Friday 14 September 2012

ಎದೆಯಾಳದ ಹನಿಗಳು ಭಾಗ- 2



ಆಲಿಂಗನ
ಅವಳ ರೆಕ್ಕೆ,ಪುಕ್ಕ
ತೋಳುಗಳಿಲ್ಲದ
ನೆನಪುಗಳನ್ನು
ತಬ್ಬುವಾಸೆ,
ನೆನಪಿನ
ಸಿಂಚನದಲಿ ನೆನೆಯುತ..!!!

ಮಿತ್ಯ
ಪದೆ-ಪದೆ
ಸುಳ್ಳುಗಳನ್ನೆ ಆನಂದಿಸಿದ
ಗೆಳತಿ,
ಕಡೆಗೊಂದು ದಿನ
ನನ್ನ ಸತ್ಯದ ಮಾತುಗಳನ್ನು
ಮರೆಯಾಗಿಸಿ,ಸುಳ್ಳಿನ ಪ್ರೀತಿಯ
ಸೌಧವ ಕಟ್ಟಿದಳು..!!!
                                                
ಓಟ
ಎಲ್ಲರು
ಓಡುತ್ತಾರೆ
ನೆಮ್ಮದಿ ಬದುಕಿನ
ಹುಡುಕಾಟದ ಹಿಂದೆ
ನೆಮ್ಮದಿಯನ್ನೇ ಮರೆತು..!!

ಬಣ್ಣನೆ
ಹಣ್ಣೆಲೆ ಉದುರುವಾಗ
ಹಸಿರಲೆ ನಗಾಡುವಾಗ
ರೆಂಬೆ-ಕೊಂಬೆಗಳ
ಮೌನ ಪರ್ವ,
ಬೇರು ಕಾಂಡಗಳ
ತನ್ಮಯ ನಯನ..!!!

ಏಕಾಂಗಿ
ನಮ್ಮ ಕಷ್ಟ-ನಷ್ಟಗಳಲ್ಲಿಯು
ನಮಗಿಷ್ಟವಾದ ಹೃದಯಕೆ
ಹಾತೋರೆಯುವ ಮನಸು
ತನ್ನ ಏಕಾಂಗಿತನವನ್ನು,
ಇಷ್ಟ ಹೃದಯದ ನೆನೆವಿನ 
ಧಾರೆಯಲ್ಲಿ ಸಾಗುತ್ತಲೆ
ಕಳೆಯುತ್ತದೆ..!!!

ಅವಳು
ಅವಳು ಮಳೆ ಸುರಿಸುವ
ವರ್ಷಧಾರೆ, ಮಳೆ ಸುರಿಸಿ
ನನ್ನೆದೆಯಿಳೆಯನ್ನು
ಹದವಾಗಿಸುತ್ತಾಳೆ,
ಒಮ್ಮೊಮ್ಮೆ ಮಿತಿಮೀರಿ
ಅತಿಯಾಗಿ ಮಳೆ ಸುರಿಸಿ,
ಗುಡುಗು ಹಿಂದೆ ಸಿಡಿಲನು
ಸಿಡಿಸಿ ಬದುಕನ್ನೆ
ಬರಿದಾಗಿಸುತ್ತಾಳೆ...!!

ಯಾಕೆ
ಕಾಲು ಕಿಲೋ
ಈರುಳ್ಳೀಯನು
ಕೋಳ್ಳುವಾಗ
ಬಾರಿ-ಬಾರಿ
ವಿಚಾರಿಸುವ
ನಾವು,
ಇಷ್ಟದ ಮನವನ್ನು
ಒಪ್ಪಿಕೋಳ್ಳುವಾಗ
ಹಿಂದೆ-ಮುಂದೆಯು 
ನೋಡುವದಿಲ್ಲ
ಬಹುಶಹ ಇದು
ಪ್ರೀತಿಯ
ಮರ್ಮವಿರಬಹುದು....

ಸನಿಹ
ಈಗಲಾದರು ಬಾ ಗೆಳೆಯ
ನನ್ನ ಅಸ್ತಮದ ಗೋಧೂಳಿ
ಎಲ್ಲೆಂದರಲ್ಲಿ
ಕೆಂಬಣ್ಣದ ಕಂಪನು ಚೆಲ್ಲಿ
ನೀ ಬಯಸಿದ ರಂಗನು ತುಂಬಿದೆ,
ಕಾರಣವ ಕೇಳಿ
ಹೋದ ನೀ ,
ಇಂದು
ನನ್ನ ನಿಜ ಒಲವಿನ ರೂಪವಾದರು
ನೋಡು ಬಾ ಅಸ್ತಮಿಸಿ
ನಾ ಸತ್ತು ಹೋಗುವ ಮೊದಲು..!!

ಒಡೆದ ಹೃದಯ
ಪ್ರೀತಿಯ ದಾಳಿಗೆ
ಒಡೆದು
ಚೂರು-ಚೂರಾದ
ಹೃದಯದಲ್ಲೂ,
ಅವಳದೆ ಇಣುಕು
ನೋಟ..!!!!

ಮೌನದ ಮಾತು
ಅವಳಿಗೆ ಹೇಳದೆ 
ಉಳಿದಹ
ನನ್ನ ಮೌನದಲಿನ
ಸಾವಿರ-ಸಾವಿರ
ಮಾತುಗಳು,
ಮೌನದ
ಗೋರಿಯ ಒಳಗೆ
ಸತ್ತುಮತ್ತೆ ಹುಟ್ಟಿ
ಉಸಿರಾಡುತ್ತಿರು
ಹೆಣಗಳು...!!!!

ಅಪ್ಪಿಕೋ
ಒಮ್ಮೆ
ಒಪ್ಪಿಕೊ
ಅಪ್ಪಿ
ನನ್ನನು,
ಮಬ್ಬು
ತುಂಬಿದ ನೋಟದಿಂದ
ಹೊರಬಂದು,ನಿನರಿವೆ
ನನ್ನೊಲವಿನ್ಹರಿವನು..!!!!

ಕೈಗೊಂಬೆ
ಏನುಮಾಡಲಿ ನಾನು
ಹೆಂಡತಿಯ ಕೈಗೊಂಬೆ
ಜುಟ್ಟು ಜನಿವಾರ ಅವಳ ಕೈಲಿ
ನಾನಿಲ್ಲಿ ಬರೀ ಖಾಲಿ...ಖಾಲಿ...!!!

ಅಮ್ಮ
ಅಮ್ಮನ ಅಳಲು
ಮರೆಯಾಗದಿರಲಿ
ಮಕ್ಕಳ ಮಮತೆಯ ಸೆಳುವಿನಲಿ,
ಕರುಳ ಬಳ್ಳಿ ನೊಂದರೆ 
ಹೂ ಬಳ್ಳಿ ಲತೆಗೆ,
ನೀರೆಲ್ಲಿ,ಹವೆಯಲ್ಲಿ 
ಹಿಗ್ಗಿ ಬೆಳೆಯಲು ಪಥವೆಲ್ಲಿ..??.

ಅಂತರ್ಯ
ನನ್ನ ಕಂಬನಿ ಧಾರೆಯಲಿ
ಮುಳುಗುವ ಭಯದಲ್ಲಿಯೇ
ವಿಹರಿಸಿದೆ ವಿನಹಃ ನೀನು
ಅದರ ಆಳವನ್ನರಿಯಲು
ಪ್ರಯತ್ನಿಸಲೇ ಇಲ್ಲ..!!

ಬರುತ್ತಾಳಂತೆ
ಅವಳು ಬರುತ್ತಾಳಂತೆ
ಎಲ್ಲ ಸುಖಗಳನ್ಹೊತ್ತು,
ಮೂರ್ಖನಾಗಿ ನಂಬಲೆ,
ಅರಳಿ ನರಳಿ ಅರೆಕ್ಷಣದಲಿ
ಮರೆಯಾಗಿ ಹೋಗುವ
ನಾಲಗೆಯ ತುದಿಯ ಮಾತನು..

ಪ್ರತಿಬಿಂಬ
ಗೆಳತಿ,ನನ್ನಲಿ ನಾನು
ನನ್ನ ಪ್ರತಿಬಿಂಬವನು
ಕಾಣಲು ಸೋತವನು
ಇನ್ನು ನೀನಾವ ಮರದ
ತೊಪ್ಪಲು..!!

ನಿಂತ ನೀರು
ನಿಂತ ನೀರಿನಂತಹ
ನಿನ್ನ ಮೋಸದ
ಪ್ರೀತಿಯಲಿ ಮಿಂದು,
ಬದುಕೆ ಮಲಿನಗೊಂಡಿತು!!
ಸಿ.ಎಸ್.ಮಠಪತಿ

No comments:

Post a Comment