Saturday 15 December 2012

ಭಾವ ಬಿಂದು (ಬಿಡಿ-ಬರಹಗಳು)

ಬರಹ

ಬರಹವೆಂಬುದೊಂದು ಕೆಲವರ ಉತ್ಕಷ್ಟ ಅಭಿವ್ಯಕ್ತಿಯ ಮಾದ್ಯಮ. ವಿಸ್ಮಯ ಪ್ರಪಂಚದಲಿ ಏನು ಇಲ್ಲ ಹೇಳಿ. ನಮ್ಮನ್ನು ನಮಗರಿಯದೇ ಮಾಯಲೋಕದಲಿ  ಪರವಶರಾಗಿಸಿ ನಮ್ಮ ತುಮುಲಗಳ ರೆಕ್ಕೆ-ಪುಕ್ಕ ತೆರೆಯಿಸಿ ಗರಿಗೆದರಿ ಹಾರುವಂತೆ ಮಾಡುತ್ತದೆ. ಮನಸಲಿ ಭಾವ ದುಂದುಬಿ ಮೊಳಗಿಸಿ ಸಹಸ್ರ ತೀರಗಳಲಿ ಭಾವನೆಗಳ ಬೆನ್ನೇರಿ ವಿಹರಿಸುವಂತೆ ಮಾಡುತ್ತದೆ. ಒಮ್ಮೊಮ್ಮೆ ನಮ್ಮಲಿ ಹುಟ್ಟುವ ಭಾವ ತುಂಬಿದ ಕಲ್ಪನೆಗಳಿಗೆ ರೂಪ ಕೊಡುತ್ತ ಪ್ರಾರಂಭಿಸುವ ಅಭಿವ್ಯಕ್ತಿ,ಓದುಗರ ಹೃದಯವನ್ನು ಸೆಳೆಯುವ ಮಟ್ಟಕ್ಕೆ ಬೆಳೆದು ಬಿಡುತ್ತದೆ. ಅದರ ಜೊತೆಗೆ, ಎಲೆ ಮರೆ ಕಾಯಿಯಂತ ಹೃದಯ ಗೂಡಿನ  ಎಷ್ಟೊ  ಬೆಚ್ಚಗಿನ ಭಾವನೆಗಳಿಗೆ ಓದುಗನಿಂದ ಮುಕ್ತಿ ದೊರೆಯಲಾರಂಭಿಸುತ್ತದೆ. ನನ್ನ ಪ್ರಕಾರ ಒಬ್ಬ ಬರಹಗಾರನಕ್ಕಿಂತ ಓದುಗ ಶ್ರೇಷ್ಠ..!!!ಅವನು ಅದೆಷ್ಟು ವಿಭಿನ್ನ ಕೋನಗಳಲಿ ನಮ್ಮ ಬರಹಗಳನು ಅರ್ಥೈಸಿಕೊಂಡು ಒಪ್ಪಿಕೊಳ್ಳುತ್ತಾನೆಂದರೆ, ನಮ್ಮ ಕಲ್ಪನೆಗಳಿಗೆ ತನ್ನ ಮನದಲ್ಲೇ ವಿಭಿನ್ನ ವರ್ಣಗಳ ಲೇಪನ ಮಾಡುತ್ತಾನೆ, ತನ್ನ ಓದಿನ ಜೊತೆಗೆ ನಮ್ಮನು ಬೆಳೆಸುತ್ತಾನೆ. ಅದರಲ್ಲೂ ನಮ್ಮ ಕನ್ನಡ ನಾಡಿನ ಕನ್ನಡಿಗರಷ್ಟು ಭಾವುಕ ಓದುಗರು ಪ್ರಾಯಶಃ ಬೇರೆ ಎಲ್ಲಿಯೂ ಇಲ್ಲ ಎಂಬುದು ನನ್ನ ಪ್ರಬಲ ಅನಿಸಿಕೆ. ನಿಜವಾಗಲೂ ಇಂಥ ಭಾವನಾಡಿನಲಿ ಹುಟ್ಟಿದ್ದು ನಮ್ಮೆಲ್ಲರ ಅದೃಷ್ಟ. ಕನ್ನಡ ಪದಗಳಲಿ ಬರೆಯುದೆಂದರೆ ಅದೊಂದು ನಾಕಪರ್ವ..!! ಇಂಥ ನಾಕಪರ್ವ ದಲಿ ನಾವಿದ್ದೇವೆ ಅಂದರೆ ಅದಕ್ಕಿಂತ ಸಂತಸ ನಮಗೇನು ಬೇಕು ಹೇಳಿ..!!
ಎಲ್ಲ ಓದುಗರಿಗೆ ಇದೋ ನನ್ನ ನಮನ...!!                                                    


ತುಡಿತ


ಕೆಲವರು ನಮಗೆ ಉತ್ಸುಕತೆಯಿಂದ ತಮ್ಮ ತುಡಿತಗಳನು ಹೇಳಬೇಕೆಂದು ಹಾತೊರೆಯುತ್ತಿರುತ್ತಾರೆ.ಅಂಥವರ ಮಾತನ್ನು ನಾವು ನಿಜವಾದ ಏಕಾಗ್ರತೆಯಿಂದ ಆಲಿಸಿದರೆ ಅವರ ಹೃದಯದಲ್ಲಿ ನಾವೊಬ್ಬ ಒಳ್ಳೆಯ ಸ್ನೇಹಿತರಾಗಿ ಉಳಿದುಬಿಡುತ್ತೇವೆ...ಅವರ ನೋವು- ನಲಿವನು ಹೊತ್ತು ಸಾಗುವ ದೋಣಿಯಾಗಿಬಿಡುತ್ತೇವೆ..!!



ಓಟಗಾರ

ಸತ್ಯ ಮಾರ್ಗದಿ ಸುಂದರ ದಿನಗಳ ಕನಸಿನಲಿ ಕನವರಿಸಬೇಕು. ಬದುಕೆಂದರೆ ದೊಡ್ಡವರು ವ್ಯಾಖ್ಯಾನಿಸಿದಂತೆ "ಮಹಾ-ಸಾಗರ" ಈಜುವುದು, ಈಜಿ ದಡಸೇರುವುದು ದುಸ್ತರ..!! ಹಾಗಂತ ನಾವು ದುರ್ಬಲರಾಗಿ ಬಿಟ್ಟರೆ ನಮ್ಮ ಬದುಕು ಕತ್ತಲ ಗೂಡಲಿ ಅಸ್ತಮಿಸಿದಂತಾಗುತ್ತದೆ. ಗುರಿ ಹಿಂದೆ ಓಡುವಾಗ ಎಡವುವುದು, ಬೀಳುವುದು ಸರ್ವೇ ಸಾಮನ್ಯ.. ಹೊಸ ಕನಸುಗಳನು ಹಾಗೂ ಹೊಸ ಬೆಳಗುಗಳನು ನಾವು ಬೆರಗು ನೋಟದಿಂದ ನೋಡಿದ್ದೇ ಆದರೆ ನಮ್ಮಲ್ಲಿ ದಿನವು ಒಬ್ಬ ಹೊಸ ಓಟಗಾರ ಹುಟ್ಟುತ್ತಾನೆ.ಅವನು ಓಡುತ್ತಾನೆ, ನವ-ದಿಗಂತಿನೆಡೆಗೆ ಕಂಡ ಕನಸಿನಲಿ ತಾ ಅಸ್ತಮಿಸಿ ಸಾಧನೆಯ ಬೆಳಗಿನಲಿ ಉದಯಿಸುತ್ತಾನೆ..!! "ಇಂದಲ್ಲ ನಾಳೆ ನಮ್ಮ ಧ್ಯಾನಕೆ ಮನ್ನನೆ ನೀಡುತ್ತಾನೆ"

ವಿಶ್ರಾಂತಿ

ಇವತ್ತಿನ ದಾವಂತದ ಬದುಕಿನಲಿ ನಾವು ಎಲ್ಲೋ ಗೊತ್ತು, ಗುರಿ ಇಲ್ಲದೆ ಜೀವನ ನಡೆಸುತ್ತಿದ್ದೇವೆ. ನಮ್ಮಗಳ ಸಹಜ ಬೇಡಿಕೆಗಳನು ಹತ್ತಿಕ್ಕಿ ಹಲವಾರು ಗೊಂದಲಗಳನ್ನು ಮೈ ಮೇಲೆ ಎಳೆದುಕೊಂಡು ಜೀವನ ಸಾಗಿಸುತ್ತಿದ್ದೇವೆ ಅನಿಸುತ್ತಿದೆ. ವಾರಕ್ಕೊಮ್ಮೆ ಬರುವ ಭಾನುವಾರವನ್ನು ಸ್ವತಂತ್ರವಾಗಿ ಸ್ವಚ್ಚಂದ ಉಲ್ಲಾಸದಲಿ ಕಳೆಯುತ್ತಿಲ್ಲ. ದೈಹಿಕವಾಗಿ ಒಂದಿಷ್ಟು ಧೀರ್ಘ ವಿಶ್ರಾಂತಿ ತೆಗೆದುಕೊಂಡರೆ ಸಾಲದು, ಜೊತೆಗೆ ನಾವು ಮಾನಸಿಕವಾಗಿಯು ನಮ್ಮಪ್ರೊಫೆಷನಲ್ಬದುಕಿನಿಂದ ಹೊರ ಬಂದು, ನಮಗೆ ಪ್ರೀತಿ ಪಾತ್ರರಾದವರ ಜೊತೆಗೆ ವಿರಾಮದ ದಿನವನ್ನು ಕಳೆಯಬೇಕು. ಇವತ್ತು ನಾವು ಮಾನಸಿಕವಾಗಿ ಒಂದಲ್ಲ ಒಂದು STRESSORS ಗಳಿಗೆ ಒಳಗಾಗಿ PSYCHOLOGICAL STABILITY ಯನ್ನು ಘಾಸಿಗೊಳಿಸುತ್ತಿದ್ದೇವೆ. ಇಂಥ ಒತ್ತಡದ ಜೀವನದಿಂದ STRESS, DEPRESSION, PSYCHOSIS, NEUROSIS  ನಂತಹ ಹಲವಾರು ಮಾನಸಿಕ ಖಾಯಿಲೆಗಳನು ಆಹ್ವಾನಿಸಿ , ನಮ್ಮದೇ ಆದಂತ ಅತ್ಯಮೂಲ್ಯ ಬಾಳನ್ನು ಇಂಥ ಬೇಡುಗಳ ನೆರಳಿನಲಿ ಕಳೆಯುತ್ತಿದ್ದೇವೆ.ನಮ್ಮ ಬಗ್ಗೆ ನಾವು ಕಾಳಜಿ ತೆಗೆದುಕೊಂಡು, ಉಲ್ಲಾಸದಾಯಕವಾಗಿ ಜೀವಿಸೋಣ ಎಂಬ  ಆಶಯದೊಂದಿಗೆ .

ಇಂಥವರು

ಒಬ್ಬೊಬ್ಬರಿರುತ್ತಾರೆ ಬಾಯಿ ತೆರೆದರೆ ಸಾಕು, ಬರೀ ಉಸ್ಸೆನ್ನುತ್ತಾ ತಮ್ಮ ಜೀವನದಲಿ ನಡೆಯಬಾರದು ನಡೆದು ಹೊಯ್ತು ಇನ್ನು, ನಾ ಎಂತಹ ಕಷ್ಟ-ಕಾರ್ಪಣ್ಯಗಳನು ಎದುರಿಸಲಾರೆ ಆಗಲೇ ಸೆವೆದು ಹೋಗಿದ್ದೇನೆ ಎಂದು ಋಣಾತ್ಮಕ ಪ್ರಪಂಚದಲಿ ಗಿರಿಕಿ ಹೊಡೆಡಯುತ್ತಾ ನಮ್ಮನ್ನು  ಸಹ ಅದರ ಸುಳಿಗೆ ಸಿಲುಕಿಸಲು ಪ್ರಯತ್ನಿಸುತ್ತಿರುತ್ತಾರೆ. ಅವರು ಪೂರ್ವ ಸುಸಜ್ಜಿತವಾಗಿ ಸೋಲನ್ನು ಒಪ್ಪಿಕೊಂಡು ತಮ್ಮ ಮನಸ್ಸನ್ನು ಒಂದು ಶೂನ್ಯಭಾವಕ್ಕೆ ಎಳೆದು ತಂದು ಕುಳ್ಳಿರಿಸಿರುತ್ತಾರೆ. ತಮ್ಮಕಂಪರ್ಟ್ ಲೆವೆಲ್”  ಜೊತೆ ಸಾಗಲು ಇನ್ನೊಂದು ಮನಸ್ಸಿನ ಸಾಂಗತ್ಯ ಬೇಕಿರುತ್ತದೆ, ಮೂಲತಃ ಅಂಥವರು ಸಹ ಜೀವದಲ್ಲಿ ಸೊಂಬೇರಿಗಳೆನಲ್ಲ. ಒಂದು ಹಂತದ ವರೆಗೂ ಹೋರಾಡಿ ಕೊನೆಗೆ ಒಂದು ಮಾನಸಿಕ ಕೋಟೆಯಲಿ ಬಂದು ನೆಲೆಸಿರುತ್ತಾರೆ. ಅಳುವ ಕಣ್ಣುಗಳಿಗೆ ಇನ್ನೊಂದು ಅಳುವ ಕಣ್ಣು ಸುಂದರವಾಗಿ ಕಾಣುತ್ತಂತೆ.ಹಾಗೆ ತಮಗೆ ಬೇಕಾದ ರೀತಿಯ ಮನಸ್ಥಿತಿಯನ್ನು ನಿಮ್ಮಲ್ಲೂ ಹುಟ್ಟು ಹಾಕಿ, ನಿಮ್ಮನ್ನು ಅವರ ಜೊತೆಗಾರನನ್ನಾಗಿಸಿಕೊಳ್ಳುತ್ತಾರೆ.



ಇದರಿಂದ ಅವರಿಗೊಬ್ಬ ಅವರಂತಿರುವ ವ್ಯಕ್ತಿತ್ವದ ವ್ಯಕ್ತಿ  ಸಿಕ್ಕಂತಾದರು, ನಿಮಗೆ ಏನು ಸಿಕ್ಕಿತು? ಅಲ್ಲಿ ನೀವು ಗಳಿಸುವದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ನಿಮ್ಮಲ್ಲಿದ್ದ ಆತ್ಮ ಬಲ, ಧನಾತ್ಮಕ ಚಿಂತನೆ, ಬೆರಗು ನೋಟ, ಆಶಾವಾದ ಎಲ್ಲವು ದಿನದಿಂದ ದಿನಕ್ಕೆ ತನ್ನ ಸೃಜನತೆ ಕಳೆದುಕೊಂಡು. ಬಲ ಹೀನವಾಗಿ ಬಿಡುತ್ತೆ. ಅದರ ಜೊತೆಗೆ ನಿಮ್ಮ ಜೀವನ ಕ್ರಮವು ಸಹ ದಿನದಿಂದ ದಿನಕ್ಕೆ ದಾರಿ ತಪ್ಪಿ ಹೋಗುತ್ತದೆ.

ಅಂದ ಹಾಗೆ, ಅಂಥವರ ಜೊತೆಗೆ ವ್ಯವಹರಿಸಬೇಡಿ ಅಂತೇನಲ್ಲ. ಅವರನ್ನು ಪ್ರೀತಿಯಿಂದ ಕಾಣಿ ಆದರೆ ಅವರ ಗೊತ್ತಿದ್ದೊ, ಗೊತ್ತಿಲ್ಲದೆನೊ ನಿಮ್ಮನ್ನು ಅವರತ್ತ ಸೆಳೆದು ಅವರ ಕಕ್ಷೆಯಲಿ ನಿಮ್ಮನ್ನು ಪ್ರತಿಷ್ಟಾಪಿಸಲು ಬಿಡಬೇಡಿ.ಎಲ್ಲರೊಂದಿಗೆ ಇರಿ,ಬೆರೆಯಿರಿ ಆದರೆ ಚೂರು ಜಾಗೃತರಾಗಿದ್ದು ವ್ಯವಹರಿಸಿ.

ಸಿ.ಎಸ್.ಮಠಪತಿ
     

No comments:

Post a Comment