ಬಂದೇ
ಬರತಾಳ ಹುಡುಗಿ
ಬಂದೆ
ಬರತಾಳ;
ಸೊಂಟದ
ಮ್ಯಾಗೊಂದು
ಬಿಂದುಗೆಯನ್ಹೊತ್ತು
ಬಾವಿಯ ನೀರಗೆ ಬಂದೆ ಬರತಾಳ..
ನಮ್ಮ
ಮನೆಯ ಕಟ್ಟಿಮ್ಯಾಗ
ಕಾಯುತ
ಕುಂತೇನ;
ತಳುಕುತ
ಬಳುಕುತ ಬಂದರೆ ಹುಡುಗಿ
ಹಿಂದೆ
ಓಡಿ ಹೋಗುವೆನ, ಬಾವಿ ನೀರನು
ಜಗ್ಗುತ
ಜೊತೆಯಲಿ
ಮೈಯ
ಮರೆಯುವೆನ; ನಲ್ಲೆಯ ಕೈ ತಾಗಲು
ನನಗ
ಜಗವ ಮರೆಯುವೆನ ನಾನು ಹಿಗ್ಗಿ ಹೋಗುವೆನ…
ತುಂಬಿದ
ಬಿಂದುಗೆ ಸೊಂಟಕೆ ಇಟ್ಟು
ಮುಖವ
ನೋಡುವೆನ;
ನಡುಗುವ
ಕೈ ಸೊಂಟವ ಸೋಕಲು
ನಾ
ಸೋತು ಹೋಗುವೆನ,
ನಲ್ಲೆಯಕೆನ್ನೆಗೆ
ರಂಗುತುಂಬಲು
ಕಣ್ಣು,
ತುಂಬಿ ಕೊಳ್ಳುವೆನ;
ಜೊತೆಗೆ
ತಿರುಗಿ ಹಿಂದಿಂದ ಹೋಗುವಾಗ .
ಇನ್ನೊಮ್ಮೆ
ನೀರಿಗೆ ಬಾರೇ ಎಂದು
ಕಿವಿಯಲಿ
ಉಸುರುವೆನ…
ಚಂಗನೆಹಾರಿ
ಕುಣಿಯುತ
ನಾನು
ಮನೆಗೆ ನುಗ್ಗುವೆನ.
ಮತ್ತೆ
ಹುಡುಗಿಯ ದಾರಿಯ ನೋಡುತ
ಕಟ್ಟೆಯ
ಮ್ಯಾಲೆ ಕುಳ್ಳುವೆನ..
ಸಿ.ಎಸ್.ಮಠಪತಿ
No comments:
Post a Comment